ನಿನ್ನ ನೀನೆ ಹೊಗೆಯ ಬಲೆಗೆ
ನೂಕುತ್ತಿರುವೆ
ಸಾವಿಗಂಚಿನ ಕನ್ನಡಿಯ
ತೋರಿ ಮರೆಮಾಚುತಿರುವೆ
ಬೇಕಿಲ್ಲವೆ ಚಂದ ಚೊಕ್ಕದ
ಪ್ರಶಾಂತ ಹ್ರದಯ
ಕೆಟ್ಟ ರಕ್ತದ ಜೊತೆ ಬೇಕಿತ್ತೆ
ನರಳಾಟ
ಗೊತ್ತಿರುವುದು ನಿನಗೆ
ಸಾವು ಖಚಿತವೆಂದು
ಬೇಕಂತಲೆ ಕರೆಯುತಿರುವೆ
ಬಾ ಬೇಗ ನನ್ನ ಬಳಿಗೆ ಎಂದು
ಹೊಗೆಯ ನಡುವಿನಲಿ ಬದುಕು
ಹೇಗೆ ಕಂಡೀತು ಚೆಲುವು
ಮಸುಕಿನ ಚಿತ್ರಣದ ಹೊರತು
ಬೇರೆನು ಕಾಣದು
ತೆರೆ ಮರೆಯ ಪರದೆಯ
ಒಮ್ಮೆ ನೀನು ತೆರೆದು ನೊಡು
ನಿನ್ನ ನೀನು ಮರೆಯಬೇಡ
ಚೊಕ್ಕಣದ ಪುಟದಲಿ ನೋಡು ನಿನ್ನ
ರೋದಿಸುವ ಮನಕೀಗ ಬೇಕಿಲ್ಲ
ಹೊಗೆಯ ಸಾಂತ್ವಾನ
ನೊಂದವಕೆ ಕೋಡು ನೀನು
ಹೊಗೆ ರಹಿತ ಜೀವನ
ಧೂಮಪಾನವೆಂಬ ಮಹಾಮಾರಿಯ ಕೆಡುಕುಗಳ ಮೇಲಿನ ಸಚಿತ್ರ ಕವನ. ಕಾಳಜಿಯಿದೆ ಈ ದುಶ್ಚಟದ ದುಷ್ಪರಿಣಾಮಗಳ ಬಗ್ಗೆ.
ReplyDeleteತುಂಬಾ ನವಿರಾಗಿ ಬಂದಿದೆ. ಶುಭವಾಗಲಿ.