Monday, February 20, 2012

ಜೀವನದ ಉಕ್ತಿ



ಮರೆತೆ ನಲಿವ
ಗತ ಘಳಿಗೆಯ ನೆನಪಲಿ
ಇಂದು ತಂದ ಹೊಸ
ಉಲ್ಲಾಸವ
ಮರೆತು ನಿಂತೆ ದೂರದಲಿ

ಬತ್ತಿದೆಯಲಿ ಬಿತ್ತು ನೀನು
ಪ್ರೀತಿ ಕರುಣೆ ಸೌಹಾರ್ದತೆ
ತುಂಬಿಸೆಲ್ಲವ ಕಲಿತ ಪಾಠವ
ಜೀವನದ ಹೊತ್ತಿಗೆಗೆ
ಎದುರಿಸುವ ಛಲ
ನಿನ್ನಲಿದ್ದರೆ
ನೀನು ಸದಾ ವಿಜಯಶಾಲಿ
ಕೂತು ನೀನು ಮರುಗಿದರೆ
ನಿನ್ನಂತ ಮೂರ್ಖರಿಲ್ಲವೋ
ಓ ಬಡಪಾಯಿ

ನಂಬಿಕೆಯಲೇ ಬಾಳು
ನೀನು ಕಾಲದ ಆಳು
ಮರುಗುವ ಮನಕ್ಕೆ ಹೇಳು
ಮಾಡದಿರು ಜೀವನವ ಹಾಳು

ನಗುವು ಸಂತೋಷದ ಸಂಕೇತ
ಅಳುವು ಹೇಡಿಯ ಧ್ಯೋತಕ
ತಿಳಿ ಮನದಿ ನಗು ಮುಗದಿ
ನವ ಜೀವನದ ಆದಿ

3 comments:

  1. ಈ ಕವಿತೆ ಚೆಂದವಿದೆ.. ಮನುಷ್ಯ ಜೀವನದಲ್ಲಿನ ಮೌಲ್ಯಾಧಾರಿತ ಜೀವನದ ಮೇಲೆ ನಿಮಗಿರುವ ಕಾಳಜಿ ಕವಿತೆಯಲ್ಲಿ ವ್ಯಕ್ತವಾಗುತ್ತದೆ.. ಕಾಲದ ಆಳಾಗಿ ಜೀವನವನ್ನು ಹಸುನು ಮಾಡಿಕೊಳ್ಳುವುದು ಜೀವನದ ಸಾರ್ಥಕ್ಯ.. ಚೆಂದದ ಪ್ರಯತ್ನ.. ಇಂತಹ ಪ್ರಯತ್ನಗಳು ಸಹಸ್ರವಾಗಲಿ ಎಂಬುದು ನನ್ನ ಹಾರೈಕೆ..:)))

    ReplyDelete
  2. ಗಲ್ಫ್ ಕನ್ನಡಿಗ ಈ ಪತ್ರಿಕೆಯಲ್ಲಿ ಬರೆದ ಅಭಿಪ್ರಾಯ:

    ಲಘು ಗಣಕ ತಂತ್ರಜ್ಞೆಯಾಗಿರುವ ಸೀಮಾ ಬುರುಡೆಯವರು ಸಂವೇದನಾಶೀಲವಾಗಿ ಕವಿತೆ ಬರೆಯುವ ಕವಿಯತ್ರಿ. ಅವರ ಬಹಳ ಕವಿತೆಗಳನ್ನು ನಾನೂ ಓದಿದ್ದೇನೆ.

    ಇಲ್ಲಿ ಬಂದಿರುವ ಕವಿಯೆಗಳಲ್ಲಿ ’ಕಂಬನಿಯ ಮಿಡಿತ’ ನಿರೀಕ್ಷೆಯ ಮಿಡಿತವನ್ನು ವ್ಯಕ್ತಪಡಿಸಿದರೆ, ’ಜೀವನ ಉಕ್ತಿ’ ಸ್ಪೂರ್ತಿ ತುಂಬುವ ಅತ್ಯುತ್ತಮ ಭಾವವನ್ನು ಹೊಂದಿದೆ.

    ReplyDelete