Friday, April 22, 2011

Untitled


ಮುಸ್ಸಂಜೆಯ ಸಮಯ
ಸುಂದರ ಕಡಲ ತೀರ
ಸೂರ್ಯ ಪಶ್ಚಿಮ ದಿಕ್ಕಿನಲ್ಲಿ
ನಾನು ಉಸುಕಿನ ದಾರಿಯಲ್ಲಿ

ಹೋದೆನು ತುಂಬಾ ದೂರ
ಸಮುದ್ರದ ಅಲೆಯ ಭೀಕರ ಆಟ
ಕತ್ತಲು ಸರಿಯಿತು
ಮನೆಗೆ ಹೋಗುವ ಕಾತುರ

ತಿರುಗಿ ಹೊರಟಿತು ಪಯಣ
ಮನೆಯ ಕಡೆಗೆ
ಕಾಣದಾದೆನು ಸಂಗಾತಿಯ
ಎಲ್ಲಿ ಮಾಯವಾಯಿತೊ ನೆನಪುಗಳು.....

Wednesday, April 6, 2011

ಇಲ್ಲಿಯವರೆಗೆ . . .







ಮನೆಯ
ಬಾಲ್ಕನಿಯಲ್ಲಿ ಕುರ್ಚಿ ತಂದಿರಿಸಿ,ಸಂಜೆಯ ತಂಗಾಳಿಗೆ ಮೈಯ್ಯೊಡ್ಡಿ ಕುಳಿತೆನು. ಐದನೆ ಮಹಡಿಯಲ್ಲಿ ಕೂತು ಸೂರ್ಯಾಸ್ತದ ಸೊಬಗನ್ನು ಸವಿಯುವುದರ ಮಜಾ ಅನುಭವಿಕೆಯಲ್ಲಿದೆ.ಹಾಗೆಯೆ ಸಮಯ ಕಳೆದಂತೆ ಸೂರ್ಯನು ತನ್ನ ಮನೆಗೆ ತೆರಳಿ ಚಂದ್ರನ ಆಗಮನವು ಅಣಿ ಗೊಳ್ಳುತ್ತಿರುವಾಗ ಮನಸ್ಸು ತನ್ನ ನೆನಪಿನ ಸುರುಳಿಯನ್ನು ಬಿಚ್ಚಿಕೊಳ್ಳಲು ಶುರು ಮಾಡಿತು.ಸುಮಾರು 20 ವರ್ಷದ ಹಿಂದಿನ ಕಾಲಚಕ್ರಕ್ಕೆ ಮನಸ್ಸನ್ನು ಕೊಂಡೊಯ್ಯಿತು.


ಮನೆಗೆ
ಹಿರಿಮಗಳಾಗಿ ಹುಟ್ಟಿದ ನಾನು,ಅಪ್ಪ ಅಮ್ಮನ ಅಕ್ಕರೆಯ ಬೈಗುಳದಿಂದಲೇ ಬೆಳೆದೆನು. ಬಾಲವಾಡಿಯಿಂದ ಸ್ವತಂತ್ರತೆಯ ಜೀವನವೂ ಪ್ರಾರಂಭವಾಯಿತು.ಈ ಸಮಯದ ಘಟ್ಟದಲ್ಲಿ ಹಲವು ಘಟನೆಗಳು ಅಚ್ಚೊತ್ತಿದವು,ಹಲವು ಮಳೆಯ ನೀರಿಗೆ ಭೂಮಿಯ ಮೇಲ್ಪದರ ಕೊಚ್ಚಿ ಹೋಗುವಂತೆ ಸೂಚನೆಯೆ ಇಲ್ಲದೆಯೆ ಮರೆಯಾದವು.


primary school life
ಮಸ್ತ್ ಮಜಾ ಇತ್ತು.ಅಕ್ಕೋರು,ಬಾಯೊರು,ಮಾಸ್ತರ್ರು ಅಂತ ಹೇಳಿಕೊಂಡು ಗುರುಗಳ ಹಿಂದೆ ಮುಂದೆ ಸುತ್ತಾಡಿಕೊಂಡಿದ್ದ ಕಾಲ. ಇದ್ದುದರಲ್ಲಿಯೆ ಚಿಂದಿ ಉಡಾಯಿಸುತ್ತಿದ್ದೆವು. ದಿನ ಪಂಚಾಂಗ ಬರೆಯುವುದು,ಗಾದೆ ಮಾತು ವಿಸ್ತರಣೆ,ನಿತ್ಯದ news paper ಮುಖ್ಯಾಂಶ ಓದುವುದು,ರಂಗೋಲಿ ಬಿಡಿಸುವುದು,ಆಣಿಮುತ್ತುಗಳು ಹತ್ತು ಹಲವಾರು ಕೆಲಸಗಳು ದಿನ ನಿತ್ಯ ನಡೆಯುತ್ತಿದ್ದವು."ಜೈ ಭಾರತ ಜನನಿಯ ತನುಜಾತೆ" ಎಂಬ ಕುವೆಂಪು ರಚಿತ ನಾಡಗೀತೆಯೊಂದಿಗೆ ಶಾಲೆ ಶುರುವಾಗಿ "ಜನಗಣ ಮನ ಅಧಿನಾಯಕ ಜಯ ಹೇ" ದಿಂದ ದಿನದ ರಂಜನೆಯ ಕ್ಷಣಗಳು ಕಳೆಯುತ್ತಿದ್ದವು.ಕಸದ ಪಾಳಿ,ನೀರಿನ ಪಾಳಿ..ಬರೀ ಪಾಳಿಗಳದ್ದೇ ಭರಾಟೆ. :) ರಾಜ ರಾಣಿಯರಾಗಿ ಮೆರೆಯುತ್ತಿದ್ದಂತ ಸುಮಧುರ ಹೊತ್ತುಗಳು.ಕೋಲಾಟ,ಗುಂಪು ನ್ರತ್ಯ,ದೀಪ ನ್ರತ್ಯ,ನಾಟಕ ವಿವಿಧ ಪಠ್ಯೇತರ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ,ಪ್ರತಿಭಾ ಕಾರಂಜಿಯಂತಹ programs,ಸಮುದಾಯದತ್ತ ಶಾಲೆ ಇನ್ನೂ ಕಣ್ಣೆದುರಿಗೆ ಪರದೆ ಕಟ್ಟಿದಂತಿದೆ.ಅದರೊಟ್ಟಿಗೆ ಗುರುಮಾತೆಯರ ಸಹಕಾರ,ಹುರಿದುಂಬುವಿಕೆ ಇನ್ನಷ್ಟು ಪ್ರೊತ್ಸಾಹಪೂರಕವಾಗಿದ್ದವು.


high school life
ಬಂದೇ ಬಿಟ್ಟಿತು.maturity level will be a bit high (no comparision with present :P) .ನಿರಂತರ ಚಟುವಟಿಕೆಯ ಜೀವನ. ಪ್ರಾಥಮಿಕ ಶಾಲೆಯ ನೆನಪುಗಳನ್ನು ಹೊತ್ತುಕೊಂಡು ಹೊಸ ರೀತಿಯ ಬದುಕು ಇರಬಹುದೆಂಬ ಸಂಶಯದಲ್ಲಿ ಶುರುವಾಯಿತು ಮೆಟ್ರಿಕ್ ಶಾಲಾ ಜೀವನ.ಹಾಡು,ಭಾಷಣ,ಪ್ರಬಂಧ,ನ್ರತ್ಯಗಳಂತಹ competitions ಗಳಲ್ಲಿ ಭಾಗವಹಿಸಿ ಪ್ರಶಸ್ತಿ ದೋಚುವಿಕೆ,ತಂದೆ ತಾಯಂದಿರ ಪ್ರೋತ್ಸಾಹ...ಇದನ್ನೆಲ್ಲ ನೆನೆಸಿಕೊಂಡರೆ ಇನ್ನೊಮ್ಮೆ ವರ್ಷಗಳು ಪುನಃ ಮರುಕಳಿಸುವುದೇ ಎಂಬ ಬಯಕೆ ಮನದ ಮೂಲೆಯಲ್ಲಿ ಚಿಗುರೊಡೆಯುತ್ತೆ.ಗೆಳೆತಿಯರ ಗುಂಪುಗಾರಿಕೆ,ಹರಟೆ ಕಣ್ಣನ್ನು ತೇವ ಮಾಡಿ ಸಂತ್ರಪ್ತ ಭಾವ ಮೂಡಿಸುತ್ತದೆ .ಗೆಳತಿಯರ ಸಂಘದಲ್ಲಿ ಮಾಡಿದ ಮೋಜು,ಮಜಾ,ಗಮ್ಮತ್ತು ಮುಖದಲ್ಲೊಮ್ಮೆ ಮಂದಹಾಸ ಸುಳಿದಾಡುವಂತೆ ಮಾಡುತ್ತದೆ :) :)


ಇನ್ನು
ಬಂದಿದ್ದೆ college life so called golden life.ಗೊತ್ತಿಲ್ಲದೆ ಪಠ್ಯೇತರ ಚಟುವಟಿಕೆಗಳಿಗೆ ತಡೆಗೋಡೆ.ಓದುವದಕ್ಕೆ ಬಹು ಪ್ರಾಮುಖ್ಯತೆ ಕೊಟ್ಟಂತ ಭಾವನೆ (ಈಗ ನನ್ನ ಅನಿಸಿಕೆ).ಹಾಗು ಹೀಗು ಪದವಿ ಶಿಕ್ಷಣ ಮುಗಿಯಿತು ಇಂಜಿನಿಯರ್ ಆಗಬೇಕೆಂಬ ಛಲದಲ್ಲಿ.ಚಿಕ್ಕಂದಿನಿಂದ ಟೀಚರ್ ಆಗಬೇಕೆಂದು autograph ಲ್ಲಿ ಬರೆದ ನೆನಪು.


ಇಂಜಿನಿಯರಿಂಗ್
life!!!
ಮಸ್ತಿ ತಂದದ್ದು.ತುಂಬಾ ಕಠಿಣ ಎಂಬುದು ಎಲ್ಲರ ಅಂಬೋಣ.ಆದರೂ 'ನನ್ನಿಂದ ಯಾಕೆ ಅಸಾಧ್ಯ' ಎಂಬ ಭಾವ.ಮನಸ್ಸು ಚಂಚಲತೆಗೆ ದಾರಿ ಮಾಡಿಕೊಡುವ ವಯಸ್ಸು."ಬಾ ನೋಡು ಗೆಳತಿ ನವಿಲು ಗರಿಯು ಮರಿ ಹಾಕಿದೆ " ಎಂದು ಹಾಡುವ ಗೆಳೆಯನ ಹುಡುಕಾಟ,ಅದರ ಜೊತೆ ಅಪ್ಪ ಅಮ್ಮನ ಭಯ :) :P :) :) :) (ಸಿಕ್ಕದಿದ್ದದ್ದು ಬೇರೆ ವಿಷಯ).. group activities,trip,seminar,project ಪಟ್ಟಿಯುದ್ದದ list ಯೊಂದಿಗೆ ಅಂತೂ ಇಂತೂ engineering distinction ದೊಂದಿಗೆ ಮುಗಿಯಿತು.ಸುರಳಿತವಾಗಿ ಮುಗಿದಿದ್ದಲ್ಲದೆ MNC ಯಲ್ಲಿ ಕೆಲಸವೂ ದೊರಕಿದ ಸಂದರ್ಭ.ಎಲ್ಲರಲ್ಲೂ ಹರ್ಷದ ಧನ್ಯವಾದಗಳು.ಮನಸಲ್ಲಿ ಎನೋ ಸಮಾಧಾನ. Wonderful life was being so.


ಸ್ವತಂತ್ರತೆಯ
ಜೀವನಕ್ಕೆ ಕಾಲಿಟ್ಟಿದ್ದೆನೆ ಅಷ್ಟೆ. ಅದರಲ್ಲಿಯ ಕಷ್ಟ-ನಷ್ಟ,ನೋವು-ನಲಿವುಗಳ ಪರಿಚಯ ಇನ್ನೂ ಕಾದಿದೆ.

ಸಂಬಂಧಗಳು ಕೊಂಡಿಗೆ ಕೊಂಡಿ ಸೇರಿಕೊಂಡಂತೆ ಬಾಲದಂತೆ ಇಲ್ಲಿಯ ತನಕವೂ ಬೆಳೆಯುತ್ತ ಬಂದಿದೆ.ಜೀವನದ ಸುಖ-ದುಃಖ ಸಮ್ಮಿಳಿತವಾಗಿ ಸಾಗಿ ಬಂದಿದೆ.ಕೊಂಡಿಯ ನಡುವೆ ಇರುವ ಅನ್ಯೋನ್ಯತೆಯ ಭಾವ ಭಾವುಕಳಾಗುವಂತೆ ಮಾಡುತ್ತದೆ.


ಜೀವನದ
ಮೊದಲ ಘಟ್ಟದಲ್ಲಿ ತಿದ್ದಿ ತೀಡಿ ನಮ್ಮನ್ನು ಮನುಷ್ಯರಾಗುವಂತೆ ಮಾಡಿದ ಇಲ್ಲಿಯವರೆಗಿನ ಗುರುಗಳಿಗೆ,ಹಿರಿಯರಿಗೆ ನನ್ನ ಭಾವಪೂರ್ವಕ ಪ್ರಣಾಮಗಳು.

ಚಿರಕಾಲ ಇರಲಿ ಈ ಸ್ನೇಹ,
ಚಿರಕಾಲ ಇರಲಿ ಈ ಪ್ರೇಮ,
ಚಿರಕಾಲ ಇರಲಿ ಈ ಹಾಡು,
ಚಿರಕಾಲ ಇರಲಿ ಈ ನೆನಪು,
ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ,
ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ, ಲೋಕದಲ್ಲಿ ಸ್ನೇಹ ಚಿರಂಜೀವಿ.ಹಾಡು ಗುನುಗುಣಿಸಿದೆ. :)